ಶಾಂತ ರೀತಿಯಲ್ಲಿ ಮಹಾಬಲೇಶ್ವರ ರಥೋತ್ಸವ
ಗೋಕರ್ಣ, ಫೆ.೨೫ - ಗೋಕರ್ಣ ಸಂಸ್ಥಾನ ಮಹಾಬಲೇಶ್ವರ ದೇವರ ರಥೋತ್ಸವ ಬುಧವಾರ ಸಂಜೆ ಶಾಂತ ರೀತಿಯಿಂದ ನಡೆಯಿತು. ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ರಥಕ್ಕೆ ವಂದನೆ ಸಲ್ಲಿಸುವುದರೊಂದಗೆ ಚಾಲನೆ ನೀಡಿದರು. ಶ್ರೀರಾಮಚಂದ್ರಾಪುರಮಠಕ್ಕೆ ದೇವಾಲಯ ಹಸ್ತಾಂತರಗೊಂಡ ಬಳಿಕ ನಡೆದ ಮೊದಲ ರಥೋತ್ಸವ ಇದಾಗಿದ್ದು, ಲಕ್ಷಾಂತರ ಭಕ್ತರು ದೇವರ ರಥ ಎಳೆದು ಪುನೀತ ಭಾವ ತಳೆದರು. ಪ್ರಧಾನ ಅರ್ಚಕರು, ಉಪಾಧಿವಂತರು, ಕ್ಷೇತ್ರದ ಎಲ್ಲ ಪುರೋಹಿತರು ಭಾಗವಹಿಸಿದ್ದರು.
Report by : Media Centre
![]() |

