ಮುಖ್ಯಮಂತ್ರಿಗಳಿಗೆ ನಂದಿಯ ಅನುಗ್ರಹ
ಗೋಕರ್ಣ, ಫೆ.೨೩ - ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ರೈತಪರ ಮುಂಗಡಪತ್ರ ಮಂಡಿಸಿ, ಕೃಷಿಪರ ಮುಖ್ಯಮಂತ್ರಿ ಎನಿಸಿದ ಬಿ.ಎಸ್. ಯಡಿಯೂರಪ್ಪನವರಿಗೆ ಪರಶಿವ ಕ್ಷೇತ್ರ ಗೋಕರ್ಣದಲ್ಲಿ ಮಹಾಶಿವರಾತ್ರಿಯ ಪರ್ವಕಾಲದಲ್ಲಿ ‘ನಂದಿ’ಯನ್ನು ಪ್ರದಾನ ಮಾಡಲಾಯಿತು.
ಗೋಕರ್ಣ ಮಂಡಲಾಧೀಶ್ವರ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಅನುಗ್ರಹ ರೂಪವಾಗಿ ನಂದಿಯನ್ನು ನೀಡಿ, ನಾಡಿನ ಸುಖ-ಸಮೃದ್ಧಿ ಇನ್ನೂ ಹೆಚ್ಚಿನ ರೀತಿಯಲ್ಲಿ ವೃದ್ಧಿಸಲಿ ಎಂದು ಹಾರೈಸಿದರು.
ಭಕ್ತಿಭಾವದಿಂದ ಭಾವುಕರಾದ ಮುಖ್ಯಮಂತ್ರಿಯವರು ನಂದಿಯ ಶಿರಕ್ಕೆ ತಲಬಾಗಿ ವಂದಿಸಿ, ಶ್ರೀಮಠ ನೀಡಿದ ಅಪೂರ್ವ ಕೊಡುಗೆಯನ್ನು ಆತ್ಮೀಯವಾಗಿ ಸ್ವೀಕರಿಸಿದರು.
ಲಕ್ಷ್ಮೀನಾರಾಯಣ ಹೆಗಡೆ ಕಲಗಾರು
Report by : Media Center
![]() |

