ಗೋಕರ್ಣದಲ್ಲಿ ಬದಲಾವಣೆ ಕಂಡಿದೆ - ಆರ್.ಎಸ್. ಭಾಗವತ್

ಗೋಕರ್ಣ - ಮಹಾ ಸಂಕಲ್ಪದಿಂದ ಶಿವರಾತ್ರೆಯವರೆಗಿನ ೬ ತಿಂಗಳವರೆಗಿನ ಅವಧಿಯಲ್ಲಿ ಗೋಕರ್ಣದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಿದೆ ಎಂದು ಮಾಜಿಶಾಸಕ, ಸಹಕಾರಿ ಧುರೀಣ ಆರ್.ಎಸ್.ಭಾಗ್ವತ್ ಹೇಳಿದರು.ಅರು ಗೋಕರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಮೂವತ್ತೈದು ವರ್ಷಗಳಿಂದ ಗಕರ್ಣದ ಸಂಪರ್ಕದಲ್ಲಿದ್ದೇನೆ. ಪುರಾಣ ಪ್ರಸಿದ್ಧವಾದ ಈಕ್ಷೇತ್ರ ತನ್ನ ಮೊದಲಿನ ದಿವತೆ ಕಳೆದುಕೊಂಡು, ಪವಿತ್ರ ಕ್ಷೇತ್ರ ಅಪವಿತ್ರಗೊಂಡು ಮಲಿನವಾಗಿತ್ತು. ಪುಣ್ಯ ಕ್ಷೇತ್ರ ಕಳೆದು ಹೋಗುವ ಅಪಾಯವಿತ್ತು. ಸರ್ಕಾರ ಸಕಾಲದಲ್ಲಿ ಎಚ್ಚೆತ್ತು ರಾಮಚಂದ್ರಾಪುರ ಮಠದ ಸುಪರ್ದಿಗೆ ವಹಿಸಿದ್ದರಿಂದ ಕ್ಷೇತ್ರ ಪಾವಿತ್ರ ರಕ್ಷಣೆಯ ಅವಕಾಶ ದೊರೆತಿದೆ ಎಂದರು. ಆರುತಿಂಗಳ ಬದಲವಣೆ ಕುರಿತು ದೇವಸ್ಥಾನದ ಸ್ವಚ್ಛತೆ,ನಿಂತುಹೋಗಿದ್ದ ಉತ್ಸವಗಳ ಪುನಾ ಆರಂಭ, ವರ್ಗ, ಜಾತಿಬೇಧವಿಲ್ಲದೇ ಎಲ್ಲರಿಗೂ ಪರಂಪರೆಯಂತೆ ಆತ್ಮಲಿಂಗದ ಪೂಜೆಯ ಅವಕಾಶ ಲಭ್ಯವಾಗಿದೆ. ಶಿವರಾತ್ರಿ ಹೊರತು ಪಡಿಸಿದರೆ ಬೇರೆ ಯಾವ ಸಮಯದಲ್ಲಿಯೂ ಗೋಕರ್ಣದ ಸಂಪರ್ಕದಿಂದ ದೂರವಿರುತ್ತಿದ್ದ ಹಾಲಕ್ಕಿ ಗೌಡರು, ಅಂಬಿಗರು, ನಾಮಧಾರಿ ನಾಯಕರು, ಹಗೇರು, ಹಳ್ಳೇರ ಸಮುದಾಯದವರು ಈಗ ದೇವಾಲಯಕ್ಕೆ ಹತ್ತಿರವಾಗಿದ್ದಾರೆ. ಅವರ ಮೂಲಭೂತ ಅಭಿವೃದ್ಧಿಯತ್ತಲೂ ಮಠ ಚಿಂತಿಸಿದೆ. ಅಲ್ಲಿನ ಬಡಕುಟುಂಬದ ಜೀವನ ಸುಧಾರಣೆಗಾಗಿ ಉತ್ತಮ ದೇಶಿತಳಿಯಹಸುಗಳನ್ನು ನೀಡುತ್ತಿದೆ. ಈಗಾಗಲೇ ೨೦೦ ಹಸುಗಳನ್ನು ಹಂಚಲಾಗಿದೆ. ಇನ್ನೂ ಸಾವಿರ ಹಸುಗಳನ್ನು ಹಂಚುವವರಿದ್ದಾರೆ. ಗೋಕರ್ಣದ ಬೀದಿಗಳಲ್ಲಿ ಅಸಭ್ಯವಾಗಿ ಓಡಾಡಿಕೊಂಡಿದ್ದ ವಿದೇಶಿಯರು ಈಗ ಶಿಸ್ತುಭದ್ಧ ನಡಾವಳಿಕೆಯನ್ನು ಪ್ರದರ್ಶಿಸುತ್ತದ್ದಾರೆ. ಗೋಕರ್ಣವೆಂದರೆ ಕೇವಲ ಬೀಚ್ ಎಂದು ತಿಳಿದಿದ್ದ ಪಶ್ಚಿಮದವರು ಮಹಾಬಲೇಶ್ವರ ದೇವಸ್ಥಾನದಲ್ಲಿ ಭಕ್ತಿಭಾವ ಪರವಶರಾಗುತ್ತಿದ್ದಾರೆ. ನಿಜಕ್ಕೂ ಗುಣಾತ್ಮಕ ಬದಲಾವಣೆ ಆಗುತ್ತಿದೆ.

 

 

 

 

 

 

 

 

Report by : Media Center

 

Shree Ramachandrapura Math