ಮಹಾಶಿವರಾತ್ರಿ ಉತ್ಸವಕ್ಕೆ ಕ್ಷಣಗಣನೆ
ಗೋಕರ್ಣ, ಫೆ.೧೭ - ಮಹಾಶಿವರಾತ್ರಿ ಮಹೋತ್ಸವಕ್ಕಾಗಿ ಗೋಕರ್ಣ ಬಗೆಬಗೆಯ ಅಲಂಕಾರಗಳೊಂದಿಗೆ ಸಜ್ಜಾಗುತ್ತಿದೆ. ತನ್ನಿಮಿತ್ತ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಪುರವನ್ನು ಪ್ರವೇಶಿಸಿ, ಸಕಲ ತಯಾರಿಗಳನ್ನೂ ವೀಕ್ಷಿಸಿದರು. ಕಳೆದ ಮಕರ ಸಂಕ್ರಮಣದಂದು ಹೊರಟು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಚರಿಸಿದ ‘ಮಹಾಶಿವರಾತ್ರಿ ಉತ್ಸವ ರಥ’ ಮತ್ತು ಹೃಷೀಕೇಶದಿಂದ ಪವಿತ್ರ ಗಂಗಾ ಜಲವನ್ನು ಹೊತ್ತು ಬಂದ ‘ಗಂಗಾ ಜಲ ರಥ’ವೂ ಪುರವನ್ನು ಪ್ರವೇಶಿಸಿತು. ನಾಳೆಯಿಂದ ಮಹಾಶಿವರಾತ್ರಿ ಮಹೋತ್ಸವ ಪ್ರಾರಂಭವಾಗಲಿದೆ. ನಾಳಿನ ಧರ್ಮಸಭೆಯಲ್ಲಿ ಶ್ರೀ ರಾಮಾನಂದ ಅವಧೂತರು, ಶ್ರೀ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಸಚಿವ ಕೃಷ್ಣಯ್ಯ ಶೆಟ್ಟಿ, ಶಾಸಕ ದಿನಕರ ಶೆಟ್ಟಿ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.
Report by : media centre
![]() |

