Guruvani

Subject:ಹಿತ ಆಹಾರವೆಂದರೇನು ?
2009-04-04 11:06:59

 

 

ಹಿಂದಿನ ಸಂಚಿಕೆಯಲ್ಲಿ ಹೇಳಿದ ಹಿತ ಆಹಾರದ ಬಗ್ಗೆಯೇ ಈ ಸಂಚಿಕೆಯಲ್ಲೂ ಮುಂದುವರಿಸುತ್ತೇವೆ.

ಈ ಹಿತ ಅನ್ನುವುದಕ್ಕೆ ಸಾಕಷ್ಟು ಅರ್ಥವಿದೆ. ಎಲ್ಲರೂ ಎಲ್ಲವೂ ಹಿತವಾಗಿರಬೇಕು, ಅಮೃತವಾಗಿರಬೇಕು ಎಂದು ಬಯಸುವುದು ಮನುಷ್ಯ ಸಹಜ ಬಯಕೆ. ಆಹಾರವೂ ಇದಕ್ಕೆ ಹೊರತಲ್ಲ. ಅದು ಹಿತ-ಮಿತವಾಗಿರಬೇಕು ಎನ್ನುವುದನ್ನು ಕೇಳಿದ್ದೇವೆ.

ಮಿತ ಅಂದರೆ ವ್ಯಾವಹಾರಿಕವಾಗಿ  ನಾವು ತಿಳಿದುಕೊಂಡದ್ದು ಕಡಿಮೆ ಎಂದು. ನೋಡಿ ಬೇಕಿದ್ದರೆ, ಬಹಳ ಕಡಿಮೆ ಮಾತನಾಡುವವರನ್ನು ‘ಅವನು ಮಿತ ಭಾಷಿ’ ಎನ್ನುತ್ತೇವೆ. ಕಡಿಮೆ ಉಂಡರೆ ಮಿತವಾಗಿ ಊಟಮಾಡಿದ ಎನ್ನುತ್ತೇವೆ. ಆದರೆ ಮಿತ ಅಂದರೆ ಕಡಿಮೆ ಎಂದೇನೂ ಅಲ್ಲ. ಆ ಶಬ್ದಕ್ಕೆ ಸಂಸ್ಕೃತ ವ್ಯಾಕರಣದಲ್ಲಿ ಬೇರೆಯದೇ ಆದ ಅರ್ಥವಿದೆ. ‘ಮಾ’ ಅಂತ �'ಂದು ಧಾತು. ಅದರರ್ಥ ಅಳತೆ ಎಂದು. ಮಿತ ಅಂದ್ರೆ ತೂಗಿದ್ದು, ಅಳತೆ ಮಾಡಿದ್ದು ಎಂದು.

ನಾವಾಡುವ ಮಾತು ತೂಗಿದ್ದಾಗಿರಬೇಕು, ನಾವುಣ್ಣುವ ಊಟ ತೂಗಿದ್ದಾಗಿರಬೇಕು. ತೂಗಿದ್ದು ಅಂದ್ರೆ ಕಡಿಮೆಯೂ ಇಲ್ಲ, ಹೆಚ್ಚೂ ಇಲ್ಲದಂತೆ ಅಳತೆಯ ಪ್ರಕಾರ ತೆಗೆದಿಟ್ಟದ್ದು. ಅಂದರೆ ಪ್ರತಿ ದಿನವೂ ನಿಗದಿತೆ ಪ್ರಮಾಣದ ಅಹಾರವನ್ನಷ್ಟೇ ಸೇವಿಸಬೇಕು. ಆಗ ಅದು ಮಿತಾಹಾರವಾಗುತ್ತದೆ.

ತೂಕಮಾಡುವಾಗ ಸ್ವಲ್ಪ ಕಡಿಮೆ ಇದ್ದರೂ ತೂಕತಪ್ಪಿತು ಎನ್ನುತ್ತೇವೆ, ಹಾಗೆಯೇ ಹೆಚ್ಚಿದ್ದರೂ ಹೇಳುತ್ತೇವೆ. ‘ನಚೈವಾತ್ಯಶನಂ ಕುರ್ಯಾತ್’. ಅಂದರೆ ಅತ್ಯಶನ-ಹೆಚ್ಚಿಗೆ ಆಹಾರ ಸೇವನೆಯನ್ನೂ ಮಾಡಬೇಡಿ. ಅನಶನ- ಆಹಾರವಿಲ್ಲದಂತೆಯೂ ಇರಬೇಡಿ. �'ಟ್ಟಾರೆ ಕಡಿಮೆ, ಹೆಚ್ಚು ಎರಡೂ ಆಗದಂತೆ ಆಹಾರವನ್ನು ಸ್ವೀಕರಿಸಬೇಕು. ಅದೂ ತಪಸ್ಸಿನ �'ಂದು ಭಾಗ.

‘ಹಿತಮಿತಮೇಧ್ಯಾಶನಂ’ ಅಂದರೆ ಮೊದಲನೆಯದು ದೇಹಕ್ಕೆ ಹಿತವಾಗುವ ಆಹಾರವನ್ನು ಸೇವಿಸಬೇಕು. ಎರಡನೆಯದು ಮಿತವಾದ ಆಹಾರ ಸೇವಿಸಬೇಕು. ಇನ್ನು ಮೇಧ್ಯ ಅಂದರೆ ಏನೆಂಬುದನ್ನು ಮುಂದೆ ನೋಡೋಣ.




Subject:ಮೇಧ್ಯ ಆಹಾರ ಯಾವುದು ?
2009-04-04 11:06:13

 

 

ಆಹಾರದ ಬಗೆಗಿನ ವಿವರಣೆ ಈ ಸಂಚಿಕೆಯಲ್ಲೂ ಮುಂದುವರಿಯುತ್ತದೆ.

ಹಿಂದಿನ ಸಂಚಿಕೆಗಳಲ್ಲಿ ಹಿತ, ಮಿತವೆಂದರೆ ಏನೆಂಬುದನ್ನು ತಿಳಿದುಕೊಂಡಿದ್ದೇವೆ. ಇನ್ನು ಮೇಧ್ಯವೆಂದರೇನು ? ಅಂದರೆ ಪವಿತ್ರವಾಗಿರಬೇಕು ಎಂದರ್ಥ.

ಆಹಾರ ಪವಿತ್ರವಾಗೋದು ಹೇಗೆ ? ಪವಿತ್ರವಾಗಬೇಕು ಅಂದರೆ ಆಹಾರ ಸಿದ್ಧಮಾಡಲು ಬೇಳೆಕಾಳುಬೇಕಷ್ಟೇ ? ಅದನ್ನು ಕೊಂಡು ತರಲೇ ಬೇಕು. ಅದಕ್ಕಾಗಿ ಹಣ ಸಂಪಾದನೆ ಮಾಡಬೇಕು. ಹಾಗೆ ಸಂಪಾದಿಸುವ ಮಾರ್ಗ ಯಾವುದು ? ಆ ಮಾರ್ಗವೂ ಪವಿತ್ರವಾಗಿರಬೇಕು. ಸನ್ಮಾರ್ಗದಲ್ಲಿ ಹಣ ಸಂಪಾದನೆ ಮಾಡಿ ಅದರ ಮೂಲಕವೇ ಆಹಾರ ಸಂಪಾದನೆ ಮಾಡಿದಾಗ ಮಾತ್ರ ಅದು ಪವಿತ್ರವಾಗಿರಲು ಸಾಧ್ಯ. ಕೇವಲ ಎಲ್ಲವನ್ನೂ ತೊಳೆದು, ಶುದ್ಧ ಮಾಡಿ, �'ಳ್ಳೆಯ ಪಾತ್ರಯಲ್ಲಿ ಆಹಾರ ತಯಾರಿಸಿದ ಮಾತ್ರಕ್ಕೆ ಅದು ಪವಿತ್ರ ಆಹಾರವಾಗುವುದಿಲ್ಲ.

ಇಷ್ಟೇ ಅಲ್ಲ ಪವಿತ್ರವಾದ ಮನಸ್ಸಿಂದ ಆಹಾರ ಸಿದ್ಧಪಡಿಸಬೇಕು. ಮನೆಯೊಡತಿ ಮೂರುಹೊತ್ತು ಕಣ್ಣೀರಿಡುತ್ತಾ ಅಡುಗೆ ಮಾಡ್ತಾ ಇದ್ರೆ ಅದು ಪವಿತ್ರವಾಗಲು ಹೇಗೆ ಸಾಧ್ಯ ? ಸಂತೋಷದಿಂದ, ಸುಮನಸ್ಸಿನಿಂದ ಅಡುಗೆ ಮಾಡಿ ಬಡಿಸಿದರೆ ಮಾತ್ರ ಅದು ಚೆನ್ನಾದೀತು.
ಹಾಗೆಯೇ ಆಹಾರ ತಯಾರಿಕೆಯಲ್ಲೂ ತನ್ಮಯತೆ ಬೇಕು. ಉದಾಹರಣೆಗೆ ಟಿವಿ ನೋಡ್ತಾನೋಡ್ತಾ ಅಡುಗೆ ಮಾಡಿದರೆ, ಅಲ್ಲಿ ಬರುವ ಸಾವು, ನೋವು, ಕಳ್ಳತನ, ಕಪಟ ಎಲ್ಲ ಭಾವನೆಗಳು ಕಲ್ಮಶಗಳು ಆಹಾರದಲ್ಲಿ ಬೆರೆಯುತ್ತದೆ.  ಅದೇ ಜೀವನದಲ್ಲೂ ಆರಂಭವಾಗುತ್ತದೆ.

ನಮ್ಮ ಇವತ್ತಿನ ಸಂಪ್ರದಾಯ ಹಾಗೇ ತಾನೇ? ಇವತ್ತು ಟಿವಿಯಲ್ಲಿ ಏನು ಬಂತೋ ನಾಳೇ ಅದನ್ನೇ ಮನೆಯಲ್ಲಿ ಮಾಡುವುದಲ್ಲವೇ ? ಹೊರತಾಗಿ ಅಡುಗೆಯಲ್ಲಿ ಸ್ವಂತ ಕ್ರಿಯಾಶೀಲತೆ ಎಂಬುದೇ ಮರೆಯಾಗಿದೆ.

ಅದಿರಲಿ, ಮಾಡಿದ ಅಡುಗೆಯನ್ನು ಸೇವಿಸುವಾಗಲೂ �'ಳ್ಳೇ ಮನಸ್ಸಿರಬೇಕು. ಪವಿತ್ರವಾದ ಮನಸ್ಸಿನಿಂದ ಊಟ ಮಾಡಬೇಕು. �"ಡಾಡುತ್ತ ತಿನ್ನೋದು ಅಥವಾ ಇನ್ನೇನೋ ಮಾತನಾಡುತ್ತ, ಏನನ್ನೋ ನೋಡ್ತಾ, ಏನೋ ಕೇಳ್ತಾ, ಹೀಗೆಲ್ಲ ತಿಂದರೆ ಅವೆಲ್ಲ ನಿಮ್ಮ ಆಹಾರದ ಜೊತೆಗೆ ನಿಮ್ಮೊಳಗೆ ಸೇರಿಬಿಡುತ್ತದೆ.

�'ಟ್ಟಾರೆ ಆಹಾರ ಸೇವನೆಗಿಂತ ಮುಂಚೆ ನಮ್ಮ ಶರೀರ, ಮನಸ್ಸು ಎಲ್ಲ ಶುಚಿಯಾಗಬೇಕು. ಆ ಮೇಲೆ ಆಹಾರ ಸೇವನೆ ಮಾಡಬೇಕು. ಹೀಗಿರಬೇಕು ಅಂತ. ಇದು ಸಹ ತಪಸ್ಸಿನ �'ಂದು ಅಂಗ. ನೆನಪಿಡಿ ಇಂಥ ಆಹಾರ ತಪಸ್ಸಿನಿಂದ ಬರೇ ಮೋಕ್ಷ ಪ್ರಾಪ್ತಿಗೆ ಮಾತ್ರ ಅಲ್ಲ. ಉತ್ತಮ ಬದುಕೂ ಸಾಧ್ಯ.




Subject:ನಮ್ಮ ಆಹಾರವೆಷ್ಟು ಹಿತ ?
2009-09-06 20:43:06

 

 

ಮಹರ್ಷಿ ವಾಲ್ಮೀಕಿಗಳಿಗೆ ಶ್ರೀರಾಮ ಗೋಚರವಾದದ್ದು ದಿವ್ಯ ಜಾಗೃತಾವಸ್ಥೆ ತಲುಪಿದ ಮೇಲೆಯೇ. ಅವರು ಶ್ರೀರಾಮನನ್ನು ಅಯೋಧ್ಯೆಯ ಸಿಂಹಾಸನದಲ್ಲಿ ನೋಡಲಿಲ್ಲ. ತಮ್ಮ ಹೃದಯ ಸಿಂಹಾಸನದಲ್ಲಿ ನೋಡಿದರು. ಹಾಗಾಗಿ ರಾಮಾಯಣ ಪ್ರಾರಂಭ ಆಗೋದು ‘ತಪಸ್ವಾಧ್ಯಾಯನಿರತಮ್’ ಅನ್ನೋ ಶಬ್ದದಿಂದ.
ಇಲ್ಲಿ ತಪಸ್ಸು, ಸ್ವಾಧ್ಯಾಯ ಎಂಬ ಎರಡು ಪದಗಳಿವೆ. ಹಾಗಾದರೆ ಏನಿದು ತಪಸ್ಸು ? ಏನಿದು ಸ್ವಾಧ್ಯಾಯ? ಭಾರೀ ಪ್ರಶ್ನೆ!
ಮೊದಲು ತಪ್ಪಸ್ಸಿನ ಬಗ್ಗೆ ಯೋಚಿಸೋಣ. ತಪಸ್ಸು ಅಂದ್ರೆ ಯೋಗ ಭಾಷೆಯಲ್ಲಿ ಹೇಳುವುದಾದರೆ ‘ಹಿತಮಿತಮೇಧ್ಯಾಶನಂ ತಪಃ’. ‘ಅಶನ’ ಅಂದ್ರೆ ಆಹಾರ. ಅದು ಹಿತವಾಗಿರಬೇಕು, ಮಿತವಾಗಿರಬೇಕು, ಮೇಧ್ಯವಾಗಿರಬೇಕು, ಅಂದರೆ ತಿನ್ನುವಂತಿರಬೇಕು.
ಇಲ್ಲಿ ಹಿತ ಎಂದರೆ ಪ್ರಿಯವಾದದ್ದು ಎಂದಲ್ಲ. ಪ್ರಿಯವಾಗಬಾರದು ಅಂತೇನಿಲ್ಲ. ಆದರೆ ದೇಹಕ್ಕೆ ಹಿತವಲ್ಲದಿದ್ದರೆ ಅಂಥ ಪ್ರಿಯ ಆಹಾರ ಕೂಡ ಬೇಡ. ನಾವು ಮೂಗು, ನಾಲಗೆ, ಕಣ್ಣು, ಬಯಸುವ ಆಹಾರ ಕೊಡುತ್ತೇವೆ. ಅದು ಹಿತವಲ್ಲ. ಆದರೆ ಶರೀರ ಕೇಳುವ ಆಹಾರ ಕೊಟ್ಟಿರೋದಿಲ್ಲ. ಮೂಗಿಗೆ �'ಳ್ಳೇ ಪರಿಮಳ ಬಂದರೆ ಅದು �'ಳ್ಳೆಯ ಆಹಾರವಾಗಿರಲು ಸಾಧ್ಯವಿಲ್ಲ. ಮೂಗು, ಮನಸ್ಸಿನ ಜೊತೆಗೆ, ಆತ್ಮನೊಂದಿಗೂ ಸಮಾಲೋಚನೆ ಮಾಡಿದ ಬಳಿಕ ಆಹಾರ ಹಿತವೋ ಅಲ್ಲವೋ ಎಂಬುದನ್ನು ನಿರ್ಧರಿಸಬೇಕು. ಹಾಗೆ ಮಾಡದೇ ತಾನೇ ಸ್ವತಂತ್ರವಾಗಿ ಇದು �'ಳ್ಳೆಯದು ಎಂದುಕೊಂಡು ಅಂಥ ಆಹಾರದ ಹಿಂದೆ ಹೋಗಿಬಿಡುತ್ತೇವೆ.
ಕಣ್ಣು �'ಳ್ಳೇ ಬಣ್ಣವಿದೆ ಎಂದರೆ, ನಾಲಿಗೆ ರುಚಿಯಾಗಿದೆ ಎಂದರೆ, ಮೂಗು ಸುವಾಸನಾಯುಕ್ತವಾಗಿದೆ ಎಂದು ಹೇಳಿ ಬಿಟ್ಟರೆ...ಅಂಥ ಆಹಾರದ ಹಿಂದೆ ಹೋಗಿಬಿಡುತ್ತೇವೆ. ಇಂದಿನ ದಿನಗಳಲ್ಲಿ ಈ ಮೂರೂ ವಿಷಯುಕ್ತವಾಗಿದೆ. ರುಚಿಯನ್ನು ವಿಷದ ಮೂಲಕ ನಿರ್ಮಾಣ ಮಾಡ್ತಾರೆ. ಇನ್ನೊಂದು ವಿಷಹಾಕಿ ಪರಿಮಳ ಬರುವಂತೆ ಮಾಡುತ್ತಾರೆ. ಮತ್ತೊಂದು ರೀತಿ ವಿಷ ಹಾಕಿ ಅದು ನೋಡಲಿಕ್ಕೆ ಸೊಬಗಾಗಿ ಕಾಣುವಂತೆ ಮಾಡ್ತಾರೆ. ಬಣ್ಣದ ವಿಷ, ಪರಿಮಳದ ವಿಷ, ರುಚಿಯ ವಿಷ, �'ಟ್ಟಾರೆ ವಿಷವನ್ನೇ ತಿನ್ನುತ್ತಿದ್ದೇವೆ. ಇದು ಹಿತ ಆಹಾರ ಹೇಗಾದೀತು ? ಯೋಚಿಸಿ.




Subject:ಆಹಾರ ಸೇವನೆಯೆಂಬುದು ತಂಪಿಗಾಗಿನ ತಪಸ್ಸು
2009-04-04 11:04:42

 

 

ಹೀಗೇ ಒಂದು ಸನ್ನಿವೇಶ. ಆಯುರ್ವೇದದ ಮಹಾದಾರ್ಶನಿಕ ಚರಕ ಒಂದು ಮರದ ಕೆಳಗೆ ಮಲಗಿಕೊಂಡಿದ್ದ. ಮೇಲಿಂದ ಒಂದು ಪಕ್ಷಿ ಹಾರಿ ಹೋಯ್ತು. ಕಾಗೆಯ ಕಾ-ಕಾ, ಕೋಗಿಲೆಯ ಕುಹೂ-ಕುಹೂದಷ್ಟೇ ಸಹಜವಾಗಿ ಆ ಪಕ್ಷಿ ಕೋರುಕ್-ಕೋರುಕ್ ಅಂತ ಉಲಿಯುತ್ತಾ ಹೋಯಿತು. ಚರಕ ದಿಗ್ಗನೆ ಎದ್ದು, ಆ ‘ಕೋರುಕ್’ ಶಬ್ದದ ಅಂತರ್ ಧ್ವನಿಯ ಬಗ್ಗೆ ಚಕಿತನಾಗುತ್ತಾನೆ.
ಆ ಶಬ್ದದ ರಚನೆಯನ್ನು ತಿಳಿದ ಯಾರೂ ಚಿಂತನೆಗೆ ತೊಡಗುತ್ತಾರೆ. ಸಂಸ್ಕೃತದಲ್ಲಿ ‘ಕೋರುಕ್’ ಶಬ್ದ ಎರಡು ಪದಗಳಿಂದ ರೂಪಿತವಾಗಿದೆ. ಕಃ ಒಂದು. ಅರುಕ್ ಇನ್ನೊಂದು. ಕಃ ಅಂದರೆ ಯಾರು, ಅರುಕ್ ಅಂದರೆ ಅರೋಗಿ, ನಿರೋಗಿ.
ಕೋರುಕ್ (ಯಾರು ಅರೋಗಿ?) ಶಬ್ದವನ್ನು ಕೇಳಿ ಚರಕ ಚಕಿತನಾಗಿದ್ದಷ್ಟೇ ಅಲ್ಲ, ಕೂಡಲೇ ಉತ್ತರವೊಂದನ್ನು ಕೊಟ್ಟೇ ಬಿಡುತ್ತಾನೆ. ‘ಹಿತಭುಕ್ ಮಿತಭುಕ್ ಕ್ಷುತಭುಕ್’ - ಹಿತ ಉಣ್ಣುವವನು, ಮಿತ ಉಣ್ಣುವವನು, ಹಸಿವಾದಾಗ ಉಣ್ಣುವವನು ಅಂತ.
ಹಿತ, ಮಿತ ಆಹಾರ ಸೇವನೆ ವಿಷಯವನ್ನು ತಿಳಿದಾಗಿದೆ. ಉಳಿದದ್ದು ‘ಕ್ಷುತಭುಕ್’ ಅಂದ್ರೆ ಏನು ಎಂಬ ಸಂಶಯ. ಆಹಾರ ಸೇವನೆ ತಪಸ್ಸಿನಂತಿರಬೇಕು ಎಂಬುದನ್ನು ಕ್ಷುತಭುಕ್ ಧ್ವನಿಸುತ್ತದೆ. ಊಟ ಬಲ್ಲವನಿಗೆ ರೋಗವಿಲ್ಲ ಇದು ಎಲ್ಲರಿಗೂ ಗೊತ್ತು. ತಮಾಷೆಗೆ ಅಂತ ಹೇಳುವುದುಂಟು. ಒಂದು ಹೊತ್ತು ಉಂಡವನು ಯೋಗಿ, ಎರಡು ಹೊತ್ತು ಉಂಡವನು ಭೋಗಿ, ಮೂರು ಹೋತ್ತು  ಉಂಡವನು ರೋಗಿ, ನಾಲ್ಕು ಹೊತ್ತು ಉಂಡವನನ್ನು ಹೊತ್ಕೊಂಡು ಹೋಗಿ ಎಂದು. ಇಲ್ಲಿ  ತಮಾಷೆ ಎನಿಸಿದರೂ ಗಮನಹರಿಸಲೇಬೇಕಾದ ಗಂಭೀರ ವಿಷಯವಿದೆ. ಅಂದರೆ ಆಹಾರಕ್ಕೆ, ಅದರ ಸೇವನೆಗೆ ಅಷ್ಟೊಂದು ಮಹತ್ತ್ವವಿದೆ.
ಪ್ರಶ್ನೆ ಏಳಬಹುದು. ಆಹಾರ ಸೇವನೆ ಎಂಬುದು ಹೇಗೆತಾನೆ ತಪಸ್ಸಾಗಲು ಸಾಧ್ಯ? ಸ್ವಲ್ಪ ಗಮನಿಸಬೇಕು. ತಪಸ್ಸು ಅನ್ನೋ ಶಬ್ದಕ್ಕೆ ಸುಡುವಿಕೆ, ದಹಿಸುವಿಕೆ ಅನ್ನೋ ಅರ್ಥವಿದೆ. ಏನನ್ನು ಸುಡೋದು, ಯಾರು ಸುಡೋದು? ಎಂಬ ಪ್ರಶ್ನೆಗಳು ಮತ್ತೆ ಏಳಬಹುದು. ಅದು ಸಹಜ.
ವೇದಮಂತ್ರ ಹೇಳುತ್ತದೆ. ‘ಅಹಂ ವೈಶ್ವಾನರೋಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ | ಪ್ರಾಣಾಪಾನ ಸಮಾಯುಕ್ತಃ ಪಚಾಮಿ ಅನ್ನಂ ಚತುರ್ವಿಧಮ್’. ಅವನೇ, ಆ ಭಗವಂತನೇ ಅಗ್ನಿಯಾಗಿ ನಮ್ಮೊಳಗೆ ನೆಲೆಸಿದ್ದಾನೆ. ಅದನ್ನ ಜಠರಾಗ್ನಿ ಎನ್ನುತ್ತೇವೆ. ಪ್ರಾಣಾಪಾನಗಳ ಜತೆ ಸೇರಿಕೊಂಡು ನಾವು ಸೇವಿಸುವ ಆಹಾರವನ್ನು ಪಚನ ಮಾಡ್ತಾನೆ.
ಈ ಜಠರಾಗ್ನಿಗೆ ಅಷ್ಟೇ ಕೆಲಸವಲ್ಲ. ಇನ್ನೂ ಸಾಕಷ್ಟು ಕೆಲಸ ಇದೆ. ಆ ಅಗ್ನಿ ವ್ಯವಸ್ಥಿತವಾಗಿದ್ದರೆ ಪಚಿಸಿದ ಆಹಾರದ ಸತ್ತ್ವವನ್ನು ವಿಭಜಿಸಿ ರಕ್ತ, ಮಾಂಸ, ಮಜ್ಜೆ ಹೀಗೆ ಶರೀರದ ನಾನಾ ಅವಯವಗಳಿಗೆ ಚಾಚೂ ತಪ್ಪದೇ ತಲುಪಿಸುವ ಕೆಲಸ ಮಾಡುತ್ತದೆ. ಅಷ್ಟೇ ಅಲ್ಲದೇ ಶರೀರದ ದೋಷಗಳನ್ನೂ ಸುಡುತ್ತದೆ. ಆಗ ನಮ್ಮ ಶರೀರ, ಮನಸ್ಸು, ಪ್ರಕೃತಿ ಪುಟಕ್ಕಿಟ್ಟ ಚಿನ್ನದ ಹಾಗಿರುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನೇ ಇನ್ನೊಂದು ಬಗೆಯಲ್ಲಿ ಹೇಳುತ್ತಾರೆ.
ದರ್ಶನಕಾರರ ನೋಟ ಅಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ಆಹಾರ ಸೇವನೆಯೆಂಬ ತಪಸ್ಸು ಸರಿಯಿದ್ದರೆ ಕುಂಡಲಿನಿಯೂ ಜಾಗೃತ ಆಗುತ್ತದೆ. ಅದು ಮೇಲ್ಮುಖವಾಗಿ ಚಲಿಸುತ್ತದೆ. ಏರುತ್ತೇರುತ್ತ ಒಳಗೇ ಇರುವ ಚಂದ್ರಮಂಡಲವನ್ನು ಕರಗುವ ಹಾಗೆ ಮಾಡುತ್ತದೆ. ಯೋಗಿಯಾದವನು ಅದನ್ನು ಪಾನಮಾಡಿ ತಂಪಾಗಿರುತ್ತಾನೆ. ತನ್ನ ನೆರೆಹೊರೆಯನ್ನೂ ತಂಪಾಗಿರಿಸುತ್ತಾನೆ.
ಹೀಗೆ ಆಹಾರ ಸೇವನೆ ಅಂತ ಅಲ್ಲ, ಎಲ್ಲ ತಪಸ್ಸೂ ತಂಪಿಗಾಗಿ ಹಂಬಲಿಸುತ್ತಿರುತ್ತದೆ.




 
Shree Ramachandrapura Math