Shree Ramachandrapura Math
Shree Ramachandrapura Math
Header Link
Home > index
 
Shivarathri - 2012
Date : 19-02-2012
ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಬಲೇಶ್ವರನ ಸಾನ್ನಿಧ್ಯದಲ್ಲಿ ದಿನಾಂಕ ೧೫-೨-೨೦೧೨ ರಿಂದ ೨೩-೨-೨೦೧೨ ರವರೆಗೆ ಶ್ರೀ ಆತ್ಮಲಿಂಗದ ಅರ್ಚನೆಯ ದೈವೀಕೋತ್ಸವ - ಶಿವರಾತ್ರಿ ಮಹೋತ್ಸವ ಪರಮಪೂಜ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ಜಗದ್ಗುರು ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ೧೫ ರಿಂದ ೨೨ ರವರೆಗೆ \'ಶ್ರೀರಾಮಕಥಾ\'ಕಾರ್ಯಕ್ರಮವೂ ನಡೆಯಲಿದೆ. ಭಕ್ತ ಶಿಷ್ಯರಿಗೆ ಆದರದ ಆಮಂತ್ರಣ.

Navarathra -2010
Date : 28-09-2010
Shree Swamiji will be camping at Shree Ramashrama, Bangalore during Navarathra, from 7th Oct. 2010 to 17th Oct. 2010

Vikruthinaama Chathurmasya
Date : 07-07-2010
Vikruthinaama Chathurmasya from 25-July-2010 to 23-September-2010 at Ashoke, Gokarna.

Inauguration of newly constructed building of Shree Bharathi college Mangalore
Date : 01-04-2010
Inauguration of newly constructed building of Shree Bharathi college Mangalore on 04-04-2010.

ವಿಕೃತಿ ಸಂವತ್ಸರದ ರಾಮೋತ್ಸವ... ಕೃತಾರ್ಥ ಭಾವ ಸಂಪನ್ನತೆಗಾಗಿ...
Date : 19-03-2010
ವಿಕೃತಿ ಸಂವತ್ಸರದ ಚೈತ್ರ ಮಾಸ. ಎಂದಿನಂತೆ ಎಲ್ಲೆಲ್ಲೂ ನವಪಲ್ಲವಗಳು ಕಂಗೊಳಿಸುತ್ತಿವೆ. ಅದರೆಡೆಯಲ್ಲಿ, ಪ್ರತಿವರ್ಷದಂತೆ ಈ ವರುಷವೂ ಶ್ರೀರಾಮಚಂದ್ರಾಪುರಮಠ ’ರಾಮೋತ್ಸವ’ದ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ. ಶ್ರೀರಾಮಾಯಣ ಮಹಾಸತ್ರದ ಧನ್ಯತೆಯಲ್ಲಿ ಮಿಂದೆದ್ದು, ವಿಶ್ವ ಗೋ ಸಮ್ಮೇಳನಕ್ಕೆ ಸಾಕ್ಷಿಯಾದ ಹೊಸನಗರದ ಪಾವನ ಭೂಮಿಯಲ್ಲಿ ತಯಾರಿಗಳು ಭರದಿಂದ ಸಾಗಿವೆ. ಇದೇ ಏಪ್ರಿಲ್ ೨೨ ರಿಂದ ೨೫ರ ವರೆಗೆ ಉತ್ಸವದ ಕಂಪು ಹೊಸನಗರದ ಊರು ಕೇರಿಗಳನ್ನು ವ್ಯಾಪಿಸಿಕೊಳ್ಳಲಿದೆ. ಪೂಜ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದೊಂದಿಗೆ ಜರುಗಲಿರುವ ರಾಮೋತ್ಸವಕ್ಕೆ ವಿಭಿನ್ನ ಆಯಾಮಗಳು, ಹೃದ್ಯ ಕಾಳಜಿಗಳು. ಏ.೨೨ರ ಸಂಜೆ ಪೂಜ್ಯ ಶ್ರೀಗಳ ಪುರಪ್ರವೇಶದೊಂದಿಗೆ ಉತ್ಸವಕ್ಕೆ ಚಾಲನೆ ಸಿಗಲಿದೆ. ಏ.೨೩ ರಂದು ಬೆಳಗ್ಗೆ ಆಚಾರ್ಯವನ ಲೋಕಾರ್ಪಣಾ ಕಾರ್ಯಕ್ರಮವಿರಲಿದೆ. ಅಪರಾಹ್ನ ೩ರ ಧಾರ್ಮಿಕ ಸಭೆಯಲ್ಲಿ ಶ್ರೀ ಕೊಟ್ಟೂರು ಸ್ವಾಮಿ ಸಂಸ್ಥಾನದ ಪೂಜ್ಯ ಶ್ರೀ ಸಂಗನಬಸವ ಮಹಾಸ್ವಾಮಿಗಳ ದಿವ್ಯ ಉಪಸ್ಥಿತಿ ಇರಲಿದ್ದು, ಕರ್ನಾಟಕ ಪಶುಸಂಗೋಪನಾ ಇಲಾಖೆಯ ನಿರ್ದೇಶಕ ಡಾ. ರಾಜಗೋಪಾಲ್ ಅವರು ಪಾಲ್ಗೊಳ್ಳಲಿದ್ದಾರೆ. ಅಂದಿನ ಸಭೆಯಲ್ಲಿ ಡಾ. ಭಾರತೀ ವಿಷ್ಣುವರ್ಧನ್ ಅವರನ್ನು ’ಶ್ರೀಮಾತಾ’ ಪ್ರಶಸ್ತಿಯೊಂದಿಗೆ ಗೌರವಿಸಲಾಗುತ್ತದೆ. ಏಪ್ರಿಲ್ ೨೪ ರಂದು ಮಧ್ಯಾಹ್ನ ಶ್ರೀಮನ್ಮಹಾರಥೋತ್ಸವ ಹಾಗೂ ಪ್ರಧಾನ ಆಕರ್ಷಣೆಯಾಗಿ ರಾತ್ರಿ ಶ್ರೀ ರಾಮಲೀಲಾ ಉತ್ಸವ ಇರಲಿದೆ. ಅಂದಿನ ಅಪರಾಹ್ನದ ಧಾರ್ಮಿಕ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ ಅಶ್ವತ್ ಅವರು ಉಪಸ್ಥಿತರಿರುತ್ತಾರೆ. ರಾಜ್ಕೋಟಿನ ಖ್ಯಾತ ಸಮಾಜ ಸೇವಕ ಶ್ರೀ ಧೀರೂಲಾಲ್ ರಮಾನಿ ಅವರನ್ನು ’ಪುರುಷೋತ್ತಮ’ ಪ್ರಶಸ್ತಿಯೊಂದಿಗೆ ಸಮ್ಮಾನಿಸಲಾಗುತ್ತದೆ. ಉತ್ಸವದ ಕೊನೆಯ ದಿನ ಏ.೨೫ ರಂದು ಮಧ್ಯಾಹ್ನ ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ ಮಹೋತ್ಸವ ಸಂಪನ್ನಗೊಳ್ಳಲಿದೆ. ಅಂದಿನ ಸಭೆಯಲ್ಲಿ ಶ್ರೀ ಕಾಣಿಯೂರು ಮಠದ ಪೂಜ್ಯ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿ ಇರಲಿದೆ. ಶ್ರೀಮಠದಲ್ಲಿ ಬಹುಕಾಲದಿಂದ ನಿಸ್ವಾರ್ಥ ಭಾವದಿಂದ ತಮ್ಮ ಸೇವಾ ಪುಷ್ಪಗಳನ್ನು ಧಾರೆ ಎರೆಯುತ್ತಿರುವ ಶ್ರೀ ಕೆ.ವಿ. ರಮೇಶ ಅವರನ್ನು ’ಧನ್ಯ ಸೇವಕ’ ಪ್ರಶಸ್ತಿಯೊಂದಿಗೆ ಗೌರವಿಸಲಾಗುವುದು. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಇರಲಿವೆ. (ಏ.೨೨ ರಿಂದ ೨೫ರ ವರೆಗೆ ಕ್ರಮವಾಗಿ) ವಿಶ್ವವಿಖ್ಯಾತ ಅಖಿಲ ಭಾರತ ಡೊಳ್ಳು ಚಕ್ರವರ್ತಿ ಡಾ. ಎ.ಆರ್. ಮುನಿರತ್ನಂ ಮತ್ತವರ ಸಂಗಡಿಗರಿಂದ ಮಂಗಳವಾದ್ಯ ಕಛೇರಿ, ಶಿವಮೊಗ್ಗದ ಯಕ್ಷಕೂಟ ಮಹಿಳಾ ವಿಭಾಗದಿಂದ ಯಕ್ಷಗಾನ ತಾಳಮದ್ದಲೆ, ಕರ್ನಾಟಕ ಸಂಗೀತದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮವಾಗಿ ಕಂಗೊಳಿಸಿದ ಹೊಸನಗರದ ಸವ್ಯಸಾಚಿ ಅವರಿಂದ ಭಕ್ತಿ ಸಂಗೀತ, ಅಂತಾರಾಷ್ಟ್ರೀಯ ಖ್ಯಾತಿಯ ಶಂಕರ ಶಾನುಭಾಗ ಮತ್ತವರ ಬಳಗದವರಿಂದ ಭಕ್ತಿ ಸಂಗೀತ ಸುಧೆ. ಇಷ್ಟಲ್ಲದೇ, ಇನ್ನೂ ಹಲವಾರು ಕಾರ್ಯಕ್ರಮಗಳು ಇರಲಿವೆ. ಭಗವಂತನ ಸೇವೆಯೊಂದಿಗೆ ಗೋಮಾತೆಯ ಸೇವೆಗೂ ಅವಕಾಶ ಕಲ್ಪಿಸಲಾಗಿದೆ. ಈ ರಾಮೋತ್ಸವವೂ ದೇವ-ಜೀವಗಳ ಸೇವಾ ಕೈಂಕರ್ಯದೊಂದಿಗೆ ಧನ್ಯತೆಯನ್ನು ಕಾಣುವಂತಾಗಲಿ ಎಂದು ಶ್ರೀಮಠದ ಆಡಳಿತ ಸಮಿತಿ ಆಶಿಸುತ್ತಿದೆ.