Vishwa Mangala Gou Grama Yathra preparation tour's PHOTOS
ಹರೇ ರಾಮ ವಸಂತನ ಆಗಮನವಾಗುತ್ತಿದೆ. ಪ್ರಕೃತಿಯೇ ಹೊಸ ಹಸಿರುಡುಗೆಯನುಟ್ಟು ನಳನಳಿಸುತ್ತಿದ್ದಾಳೆ. ಇನ್ನು ನಮ್ಮ ವೆಬ್ ಸೈಟ್ ಏನು ಕಡಿಮೆ ? ಗೋಕರ್ಣ ಮಂಡಲಾಧೀಶ ಜಗದ್ಗುರು ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಆಶಯ, ಅದೇಶದಂತೆ ಹೊಸ ಅಂಕಣಗಳೊಂದಿಗೆ ನವೀಕರಣಗೊಂಡು ಶ್ರೀ ಮಠದ 'ವೆಬ್ ಸೈಟ್ - ಭಾಗ-೧' ಶ್ರೀ ಗುರುಗಳ ಪಾದಾರವಿಂದಗಳಿಗೆ ಸಹಸ್ರ ನಮನಗಳೊಂದಿಗೆ ಅರ್ಪಿತವಾಗುತ್ತಿದೆ. ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಆರಂಭವಾಗಿರುವ ಶಿವರಾತ್ರಿ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಇದು ಅನಾವರಣಗೊಳ್ಳುತ್ತಿರುವುದು ನಮ್ಮ ಭಾಗ್ಯ. ಕೆಲವು ವರ್ಷಗಳಿಂದ 'Static' ಆಗಿ, ಹೆಚ್ಚು ಕಡಿಮೆ 'ನಿಂತ ನೀರಾಗಿ'ಯೇ ಇದ್ದ srimath.org ಈಗ 'Dynamic' ಆಗಿ ಪರಿವರ್ತಿತವಾಗುತ್ತಿದೆ. ಶ್ರೀ ಸಂಸ್ಥಾನದ ಕಾರ್ಯವೇಗಕ್ಕೆ ಶ್ರೀಮಠದ ವೆಬ್ ಸೈಟ್ ಕೂಡ ಸ್ಪಂದಿಸಬೇಕು ಹಾಗೂ ಗುರು-ಶಿಷ್ಯರ ಸಂವಾದಕ್ಕೆ ಇದೊಂದು ಕೊಂಡಿಯಾಗಬೇಕು ಎನ್ನುವುದು ಆಶಯ. ನವೀಕರಣಗೊಳ್ಳುತ್ತಿರುವ ವೆಬ್ ಸೈಟ್ ನಲ್ಲಿ ಹೊಸತೇನಿದೆ ? ಹಾಗೂ ಅವುಗಳ ಉದ್ದೇಶಗಳೇನು ? ನೋಡಿ ಃ 1.ಶ್ರಿಮುಖ (ShriMukha):ಇದು ಶ್ರೀ ಗುರುಗಳೊಂದಿಗೆ ನೇರವಾಗಿ ಸಂವಾದ (ಚಾಟ್)ಮಾಡಲು ಇರುವ ವೇದಿಕೆ. ನಿಗದಿತ ಸಮಯದ ಅವಧಿಯಲ್ಲಿ ಶಿಷ್ಯರು ಗುರುಗಳಿಗೆ ಪ್ರಶ್ನೆಗಳನ್ನು ಈ ಮೊ ಲಕ ಕೇಳಬಹುದು ಹಾಗೂ, ಆಯ್ದ ಪ್ರಶ್ನೆಗಳಿಗೆ ಶ್ರೀ ಸಂಸ್ಥಾನ ಉತ್ತರಿಸುತ್ತಾರೆ. ಸಂವಾದವು ನಿಗದಿತ 'ವಿಷಯ'ದ ಮೇಲೆ ಕೂಡಾ ಇರಬಹುದು. ಆಯ್ದ ಪ್ರಶ್ನೋತ್ತರಗಳನ್ನು 'ಪ್ರಶ್ನೋತ್ತರ' ವಿಭಾಗದಲ್ಲಿ ಪ್ರಕಟಿಸಲಾಗುವುದು. ಸಂವಾದದ ಸಮಯವನ್ನು ' ' ವಿಭಾಗದಲ್ಲಿ ಪ್ರಕಟಿಸಲಾಗುತ್ತದೆ. 2.ಶ್ರೀ ಸಭಾ (Net Meeting ) : ಆಯ್ದ ವಿಭಾಗ ಅಥವಾ ನಿಗದಿತ ಕಾರ್ಯಕರ್ತರೊಂದಿಗೆ ಗುರುಗಳು ನಡೆಸುವ ಸಂವಾದ. ಇದಕ್ಕೆ ಸಮಯ ಹಾಗೂ ವಿಷಯ ಮೊದಲೇ ನಿರ್ಧರಿತವಾಗಿರುತ್ತದೆ. ಆಮಂತ್ರಿತರು ಮಾತ್ರ ಇದರಲ್ಲಿ ಭಾಗವಹಿಸಲು ಅವಕಾಶ. 3. ಶ್ರೀ ಛಾಯಾ ( Photo Albums): ಶ್ರೀಮಠಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯದ ಮೇಲೆ ತೆಗೆದ ಛಾಯಾ ಚಿತ್ರಗಳನ್ನ ನಿಮ್ಮದೇ ಆಲ್ಬಂನಲ್ಲಿ ಲಗತ್ತಿಸಬಹುದು. ಶ್ರೀಮಠದ ಮರ್ಯಾದೆಗೆ ಧಕ್ಕೆ ಬರಬಾರದು ಎನ್ನುವ ಉದ್ದೇಶದಿಂದ ಆಲ್ಬಂ ಅನ್ನು 'ವೆಬ್ ಮಾಸ್ಟರ್' ಪಾಸ್ ಮಾಡಿದ ಮೇಲೆ ಸೈಟ್ ನಲ್ಲಿ ವೀಕ್ಷಿಸಬಹುದು. 4. ಅನುಭವ ಧಾರೆ(Share Your Experience) :ಶ್ರೀಮಠಕ್ಕೆ ಸಂಬಂಧಿಸಿದಂತೆ ನಿಮ್ಮ ವಿಶೇಷ ಅನುಭವಗಳನ್ನು ಹಂಚಿಕೊಳ್ಳುವ ವೇದಿಕೆ ಇದು. ವಿವರಣೆಯ ಜೊತೆಗೆ ಇಲ್ಲಿ ಛಾಯಾ ಚಿತ್ರಗಳನ್ನು ಕೂಡಾ ಸೇರಿಸುವ ಅವಕಾಶವಿದೆ. 'ವೆಬ್ ಮಾಸ್ಟರ್' ರ ಅನುಮತಿಯ ನಂತರ ಇದನ್ನು ಸೈಟ್ ನಲ್ಲಿ ಓದಬಹುದು. 5. ತಾಜಾ ಸುದ್ಧಿ (Latest News): ಶ್ರೀಮಠಕ್ಕೆ ಸಂಬಂಧಿಸಿದ ತಾಜಾ ಸುದ್ದಿಗಳನ್ನು ಇಲ್ಲಿ ಬಿತ್ತರಿಸಲಾಗಿವುದು. ೩ ಕೋಲಂಗಳಿದ್ದು, ಉಳಿದ ಸುದ್ದಿಗಳು 'ನ್ಯೂಸ್' ವಿಭಾಗದಲ್ಲಿ ಇರುತ್ತವೆ. 6. ಪ್ರಶ್ನೋತ್ತರ (Question Bank): ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ಗುರುಗಳು ಉತ್ತರಿಸುತ್ತಾರೆ. ಈ ಪ್ರಶ್ನೋತ್ತರ ಮಾಲೆಯನ್ನು ಇಲ್ಲಿ ಪ್ರಕಟಿಸಲಾಗುತ್ತದೆ. ಶಿಷ್ಯರು ವೈಯಕ್ತಿಕ ಪ್ರಶ್ನೆಗಳನ್ನು ಕೂಡ ಕೇಳಬಹುದಾಗಿದ್ದು, ಉತ್ತರವು ಅವರ ಈ-ಮೈಲ್ ಗೆ ರವಾನೆಯಾಗುತ್ತದೆ. ಇದು 'ಅಫ್ - ಲೈನ್' ವಿಭಾಗ. 7. ಶಿಷ್ಯ ಸಂವಾದ(Discussion forum ): ಸದಭಿರುಚಿಯ ಹಾಗೂ ಶ್ರೀ ಮಠದ ಕಾರ್ಯಯೋಜನೆಗಳಿಗೆ ಸಂಬಂಧಿಸಿದ ವಿಷಯಗಳ ಮೇಲೆ ಶಿಷ್ಯರು ನಡೆಸುವ ಚರ್ಚೆ / ಸಂವಾದಕ್ಕೊಂದು ವೇದಿಕೆ. 8. ಪ್ರಕಟಣೆಗಳು(Announcements ) : ಈ ವಿಭಾಗವನ್ನು ಸದಾ ಗಮನಿಸುತ್ತಿರಿ. ಶ್ರೀಮುಖ ಸಂವಾದ ಮುಂತಾದ ಪ್ರಕಟಣೆಗಳು ಕೂಡ ಇಲ್ಲಿ ಇರುತ್ತವೆ. 9. ಶ್ರೀ ಕಾರ್ಯ( Events ): ಶ್ರೀ ಮಠದ ಎಲ್ಲಾ ವಿಶೇಷ ಕಾರ್ಯಕ್ರಮಗಳ ವಿವರಗಳು ಇಲ್ಲಿ ಲಭ್ಯ. 10. ಶ್ರೀ ದರ್ಶನ (Seek Appointment) ಃ ಶ್ರೀ ಸಂಸ್ಥಾನದ ಭೇಟಿ ಮಾಡಲು ಇಚ್ಚಿಸುವವರು ಸವಿವರಗಳೊಂದಿಗೆ ಇಲ್ಲಿ ನೋಂದಾಯಿಸಬಹುದು. ಶ್ರೀ ಗುರುಗಳ ಅನುಮತಿ ದೊರಕಿದ ನೋಂದಾಯಿತರಿಗೆ ಈ-ಮೈಲ್ ಮೊಲಕ ಸೂಚನೆ ತಲಪುತ್ತದೆ. ಸಧ್ಯಕ್ಕೆ ಇದೊಂದು ಪ್ರಾಯೋಗಿಕ ವಿಭಾಗವಾಗಿದ್ದು, ಕಾಲ ಕಾಲಕ್ಕೆ ಇದರ ಉಪಯೋಗವನ್ನು ಪರಿಶೀಲಿಸಲಾಗುವುದು. ಸೂಚನೆಗಳು ಃ ೧. ಹೆಚ್ಚಿನ ಎಲ್ಲಾ ವಿಭಾಗಗಳನ್ನು ಉಪಯೋಗಿಸಲು ನಮೊದನೆ ( user registration ) ಖಡ್ಡಾಯವಾಗಿರುತ್ತದೆ. ೨. ಸೈಟ್ ನಲ್ಲಿ ಕನ್ನಡ , ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು 'enable' ಮಾಡಿದ್ದೇವೆ. ನಿಮಗೆ ಬೇಕಾದ ಭಾಷೆಯನ್ನು ಆಯ್ದುಕೊಳ್ಳಬಹುದು. ೩. ವೆಬ್ ಸೈಟ್ ಸರಿಯಾಗಿ ಕಾಣಲು - I.E. 7.x or Mozilla FireFox 3.x or above version ಅನ್ನು 'browser' ಆಗಿ ಉಪಯೋಗಿಸಿ : ಇವಿಷ್ಟು 'ವೆಬ್ ಸೈಟ್ ಭಾಗ - ೧' ರ ಪರಿಚಯ. ಇನ್ನೂ ಅನೇಕ ವಿಭಾಗಗಳನ್ನು ತೆರೆಯುವ ಯೋಜನೆ ಇದೆ. ಶ್ರೀ ಗುರುಗಳ ಆಶೀರ್ವಾದದಿಂದ ಅಭಿವೃದ್ಧಿ ಪಡಿಸಿದ ಈ ವೆಬ್ ಸೈಟ್ ಹಾಗೂ ಇದರ ಉಪಯೋಗದ ಬಗ್ಗೆ ನಿಮ್ಮ ಅನಿಸಿಕೆ / ಸಲಹೆಗಳನ್ನು ಪಡೆಯುವ ಕುತೂಹಲ ನಮಗೆ. 'feedback' ವಿಭಾಗದಲ್ಲಿ ನಿಮ್ಮನ್ನು ನಿರೀಕ್ಸಿಸಲೇ ?. ವೆಬ್ ಸೈಟ್ ಅಭಿವೃದ್ಧಿ ಕಾರ್ಯದಲ್ಲಿ ನಮ್ಮೊಂದಿಗೆ ಕೈ ಜೋಡಿಸಲು ನಿಮ್ಮಲ್ಲಿ ವಿನಂತಿ. ಶ್ರೀ ಗುರುಗಳ ಪಾದಾರವಿಂದಗಳಿಗೆ ಅನಂತ ಪ್ರಣಾಮಗಳು. ಹರೇ ರಾಮ. ವೆಬ್ ಸೈಟ್ ಅಭಿವೃದ್ಧಿ ವಿಭಾಗದ ಪರವಾಗಿ, ಸತ್ಯ ಶಂಕರ ಮರಕಿಣಿ
